ಪ್ರತಿಷ್ಠಿತ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ಉದ್ಯೋಗ ಅವಕಾಶಗಳು. ಕೊನೆಯ ದಿನಾಂಕ 18-08-2024
ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘ, ನೇಮಕಾತಿ ಅಧಿಸೂಚನೆಯ 2024, ನೇಮಕಾತಿ ಬಗ್ಗೆ ಸೂಚನೆ ಹೊರಡಿಸಿದ್ದಾರೆ,ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘ, ಮುಗುಳುಕೋಡ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಅನುದಾನಿತ ವಿದ್ಯಾಸಂಸ್ಥೆ,
ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಯುತ್ತಿರುವ ಅನುದಾನಿತ ಬ. ನೀ. ಕುಲಿಗೋಡ ಸಂಯುಕ್ತ ಪದವಿ ಪೂರ್ವ ಕಾಲೇಜು ( ಪ್ರೌಢಶಾಲಾ ವಿಭಾಗ), ಮುಗುಳುಕೋಡದಲ್ಲಿ ನಿಧನ ಹಾಗೂ ನಿವೃತ್ತಿಗಳಿಂದ ಖಾಲಿಯಾಗಿರುವ ಈ ಕೆಳಕಂಡ ಉದ್ಯೋ ಗಳನ್ನು ಭರ್ತಿ ಮಾಡಿಕೊಳ್ಳಲು ಮಾನ್ಯ ಹೈಕೋರ್ಟ್ ನ್ಯಾಯಾಲಯ, ಕರ್ನಾಟಕ ಇವರ ಆದೇಶ ಸಂಖ್ಯೆ.11667/2022 ದಿನಾಂಕ :08-12-2023ರ ಪ್ರಕಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
ಜಾಹಿರಾತು ಪ್ರಕಟಗೊಂಡ 21 ದಿನಗಳ ( ದಿನಾಂಕ : 18-08-2024 ರ ) ಒಳಗಾಗಿ ತಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳೊಂದಿಗೆ ಮತ್ತು ಬೋಧಕ ಅಭ್ಯರ್ಥಿಗಳು ರೂ, 2000/- ಹಾಗೂ ಬೋಧಕೇತರ ಹುದ್ದೆಯ ಅಭ್ಯರ್ಥಿಗಳು ರೂ, 1000/- ಗಳ ಬ್ಯಾಂಕ್ ಉಂಡಿಯನ್ನು ಚೇರ್ಮನ್ನರು ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘ, ಮುಗುಳುಕೋಡ ಇವರ ಹೆಸರಿನಲ್ಲಿ ಪಡೆದು ಅರ್ಜಿಯನ್ನು ಸಲ್ಲಿಸಬೇಕು ಅದರ ಒಂದು ಪ್ರತಿಯನ್ನು ಮಾನ್ಯ ಉಪ ನಿರ್ದೇಶಕರು, ಶಾಲಾ ಶಿಕ್ಷಣ
ಇಲಾಖೆ, ಚಿಕ್ಕೋಡಿ ಇವರಿಗೆ ಸಲ್ಲಿಸಬೇಕು,
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕ ಮತ್ತು ವೇಳೆಯನ್ನು ನಂತರ ತಿಳಿಸಲಾಗುವುದು ಆಯ್ಕೆಯಾದ ಅಭ್ಯರ್ಥಿಗಳು ಮಾನ್ಯ ಉಚ್ಚ ನ್ಯಾಯಾಲಯ, ಕರ್ನಾಟಕ ಇವರ ಮಾರ್ಗಸೂಚಿಗಳ ಪ್ರಕಾರ ನೇಮಕಾತಿಗಳನ್ನು ಇಲಾಖೆ ನಿಖರ ನಿಲುವು ತೆಗೆದುಕೊಂಡು ಅನುಮೋದನೆ ನೀಡುವವರೆಗೆ ತಾತ್ಕಾಲಿಕವಾಗಿ ಶಾಲೆಯ ಕರ್ತವ್ಯದಲ್ಲಿ ಮುಂದುವರೆಯಲು ಸಿದ್ದರಿರಬೇಕು, ಈಗಾಗಲೇ ತಾತ್ಕರಿಕವಾಗಿ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಸ್ಥಳ : ಮುಗಳಕೋಡ
ದಿನಾಂಕ : 26-07-2024
ಕೊನೆಯ ದಿನಾಂಕ : 18-08-2024
Nice Blog
ReplyDeleteVisit our post a job for free